ಪರಿಚಯ : ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ನೀತಿಗಳನ್ನು ಕಾರ್ಯಗತಗೊಳಿಸಲು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2011 ರಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗವನ್ನು ಸ್ಥಾಪಿಸಿದೆ. ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಯಪುರ, ಬಾಗಲಕೋಟ ಮತ್ತು ಜಮಖಂಡಿಯಲ್ಲಿರುವ ಸ್ನಾತಕೋತ್ತರ ಕೇಂದ್ರಗಳ ಹಾಗೂ ಘಟಕ ಮಹಾವಿದ್ಯಾಲಯ, ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ವಿವಿಧ ಕಾರ್ಯಕ್ರಮಗಳು ಈ ವಿಭಾಗದ ವ್ಯಾಪ್ತಿಗೆ ಬರುತ್ತವೆ. ವಿದ್ಯಾರ್ಥಿ ಕಲ್ಯಾಣ ವಿಭಾಗವು ಹಾಸ್ಟೇಲ್ಗಳು ಎನ್.ಎಸ್.ಎಸ್., ರೆಡ್ ಕ್ರಾಸ್, ಎಸ್ಸಿ/ಎಸ್.ಟಿ ಮತ್ತು ಓಬಿಸಿ ಸೆಲ್ ವಿದ್ಯಾರ್ಥಿಗಳ ಜಿಮಖಾನಾ ಕಾರ್ಯಕ್ರಮಗಳು ಮತ್ತು ಯುವಜನೋತ್ಸವ, ಕಲ್ಯಾಣ ಯೋಜನೆಗಳು, ಚೆನ್ನಮ್ಮ ಯುವ ಸಂಭ್ರಮ, ವಿದ್ಯಾರ್ಥಿಗಳ ಕುಂದುಕೊರತೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರಾಗಿ ಪ್ರೊ.ಚಂದ್ರಿಕಾ ಕೆ. ಬಿ. ಕಾರ್ಯ ನಿರ್ವಹಿಸುತ್ತಿದ್ದಾರೆ. ಉದ್ದೇಶಗಳು : • ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮತ್ತು ಸಹಶೈಕ್ಷಣಿಕ ಆಸಕ್ತಿಗಳನ್ನು ಉತ್ತೇಜಿಸುವುದು. • ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಶ್ವವಿದ್ಯಾಲಯದ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಸಮನ್ವಯಗೊಳಿಸುವುದು. • ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುವುದು ಮತ್ತು ಅವರ ಸುಪ್ತ ಪ್ರತಿಭೆಗಳನ್ನು ಹೊರತರುವುದು. • ವಿದ್ಯಾರ್ಥಿಗಳಲ್ಲಿ ಒಳ್ಳೆಯ ಮೌಲ್ಯಗಳು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು.
ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ಕೋಶಗಳು ಮತ್ತು ವಿಭಾಗಗಳು. 1. ವಿದ್ಯಾರ್ಥಿ ಜಿಮ್ಖಾನಾ. 2. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೋಶ 3. ಓಬಿಸಿ ಕೋಶ 4. ಆರೋಗ್ಯ ಕೇಂದ್ರ. 5. ಉದ್ಯೋಗಾವಕಾಶ ಕೋಶ. 6. ವಿದ್ಯಾರ್ಥಿ ಆಪ್ತ ಸಮಾಲೋಚನಾ ಕೋಶ 7. ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಲಹಾ ಸಮಿತಿ. 8. ಯುವ ರೆಡ್ ಕ್ರಾಸ್. 9. ಹಳೆಯ ವಿದ್ಯಾರ್ಥಿಗಳ(Allumni)ಸಂಘ. 10. ವಿದ್ಯಾರ್ಥಿ ಕುಂದುಕೊರತೆ ಮತ್ತು ಪರಿಹಾರ ಕೋಶ. 11. ರಾಗಿಂಗ್ ವಿರೋಧಿ (Anti Raging) ಕೋಶ 12. ಮಹಿಳಾ ಸಬಲೀಕರಣ ಕೋಶ. 13. ಲೈಂಗಿಕ ಕಿರುಕುಳ ವಿರೋಧಿ ಕೋಶ (ICC- Internal Complaint Cell) 14. ಎನ್.ಎಸ್.ಎಸ್. ಕೋಶ
ಬೋಧಕೇತರ ಸಿಬ್ಬಂದಿ: 1. ಶ್ರೀಮತಿ. ಪೂರ್ಣಿಮಾ ಎಸ್. ಹುನಗುಂದ ಪ್ರಥಮ ದರ್ಜೆ ಸಹಾಯಕರು.
ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಸುಧಾರಣೆಗೆ ಪೂರಕವಾಗಿರುವ ವಿಭಿನ್ನ ಚಟುವಟಿಕೆಗಳನ್ನು ವಿದ್ಯಾರ್ಥಿ ಕಲ್ಯಾಣ ವಿಭಾಗವು ಪ್ರಾರಂಭಿಸಿದೆ. ಈ ಮೂಲಕ ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಉನ್ನತ ಕಲಿಕೆಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುತ್ತಿದೆ. ಅವುಗಳಲ್ಲಿ ಈ ಕೆಳಗಿನ ಚಟುವಟಿಕೆಗಳು ಪ್ರಮುಖವಾಗಿವೆ. • ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಅಂತರವಲಯ) ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯುವಜನೋತ್ಸವವನ್ನು (“ಚನ್ನಮ್ಮ ಸಂಭ್ರಮ”) ವನ್ನು ಆಯೋಜಿಸುವುದು. • ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕವಾಗುವ ಕಾರ್ಯಾಗಾರಗಳನ್ನು ಏರ್ಪಡಿಸುವುದು. • ವಿದ್ಯಾರ್ಥಿಗಳಿಗೆ ಉದ್ಯೋಗ (ವೃತ್ತಿ ತರಬೇತಿ) ಮಾರ್ಗದರ್ಶನ ಕಾರ್ಯಕ್ರಮ/ತರಬೇತಿಗಳನ್ನು ಏರ್ಪಡಿಸುವುದು. • ಆರೋಗ್ಯ ಶಿಬಿರಗಳನ್ನು ನಡೆಸುವುದು. • ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ಶೈಕ್ಷಣಿಕ ಆಪ್ತಸಮಾಲೋಚನಾ ಸೇವೆಯನ್ನು ಒದಗಿಸುವುದು. • ಕ್ರೀಡಾ ಮತ್ತು ಸಾಂಸ್ಕೃತಿಕ ಸಮನ್ವಯ ಚಟುವಟಿಕೆಗಳನ್ನು ವಿದ್ಯಾರ್ಥಿ ಜಿಮ್ಖಾನಾದ ಮೂಲಕ ನಡೆಸುವುದು. • ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು. • ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ಒದಗಿಸುವುದು. • ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ ಮತ್ತು ಇತರೆ ಸೌಲಭ್ಯಗಳ ಮೇಲ್ವಿಚಾರಣೆ ಮಾಡುವುದು. • ವಿದ್ಯಾರ್ಥಿ ಮಾಹಿತಿ ಸೇವೆಗಳು; ನೋಟಿಸ್ ಬೋರ್ಡ್ನಲ್ಲಿ ಹಾಗೂ ವೆಬ್ಸೈಟ್ನಲ್ಲಿ ಅಧಿಕೃತ ಸುತ್ತೋಲೆಗಳು ಮತ್ತು ಪೋಸ್ಟರ್ಗಳನ್ನು ಪ್ರಚುರ ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದು. • ಮಹಿಳಾ ಸಬಲೀಕರಣ ಕೋಶದ ಮೂಲಕ ಮಹಿಳಾ ವಿದ್ಯಾರ್ಥಿಗಳಿಗೆ ವಿಶೇಷ ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುವುದು. • ವಿಶ್ವವಿದ್ಯಾಲಯ ಆಡಳಿತ ಮತ್ತು ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಸಂಪರ್ಕವನ್ನು ಕಲ್ಪಿಸುವುದು.
ಸೌಲಭ್ಯಗಳು :
• ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಮತ್ತು ಅವರ ವೈಯಕ್ತಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಸೇವೆಗಳನ್ನು ಯು.ಜಿ.ಸಿ. ಮಾರ್ಗಸೂಚಿಯನ್ವಯ ಉಚಿತವಾಗಿ ಒದಗಿಸಲಾಗಿದೆ. • ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳ ಕುಂದುಕೊರತೆ ಮತ್ತು ಪರಿಹಾರ ಕೋಶವು ವಿದ್ಯಾರ್ಥಿಗಳ ಸಮಸ್ಯೆ ಮತ್ತು ಸವಾಲುಗಳ ಕುರಿತು ಪರಿಹಾರಗಳನ್ನು ನೀಡುವಲ್ಲಿ ಗಮನಹರಿಸುತ್ತಿದೆ. • ವಿಶ್ವವಿದ್ಯಾಲಯದ ವಸತಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. • ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವುದು. • ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಮತ್ತು ವೃತ್ತಿ ಮಾರ್ಗದರ್ಶನ ಸೌಲಭ್ಯವನ್ನು ಪ್ಲೇಸಮೆಂಟ್ ಸೆಲ್ ಮೂಲಕ ಒದಗಿಸಲಾಗಿದೆ. • ಕ್ಯಾಂಟೀನ್ ಸೌಲಭ್ಯವನ್ನು ನಿಗದಿತ ಬೆಲೆಯೊಂದಿಗೆ ಒದಗಿಸಲಾಗಿದೆ. • ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫೋಟೋ ನಕಲು ಮತ್ತು ಲೇಖನ ಸಾಮಗ್ರಿಗಳ ಅಂಗಡಿಯನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. • ವಿದ್ಯಾರ್ಥಿನಿಯರಿಗಾಗಿ ವಿಶ್ರಾಂತಿ ಕೊಠಡಿಯನ್ನು ಒದಗಿಸಲಾಗಿದೆ.
ಸಂಪರ್ಕಕ್ಕಾಗಿ: 1. ಪ್ರೊ. ಬಸವರಾಜ ಪದ್ಮಶಾಲಿ ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ ವಿಭಾಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ. 2. ಶ್ರೀಮತಿ. ಪೂರ್ಣಿಮಾ ಎಸ್. ಹುನಗುಂದ ಪ್ರಥಮ ದರ್ಜೆ ಸಹಾಯಕರು ವಿದ್ಯಾರ್ಥಿ ಕಲ್ಯಾಣ ವಿಭಾಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ. ಮಿಂಚಂಚೆ : studentwelfare@rcub.ac.in